ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡಿಸೆಂಬರ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

2022ರ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ ಪ್ರಕಟ - ಅವ್ವ ಪುಸ್ತಕಲಯ

2022ರ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ ಪ್ರಕಟ  ಅವ್ವ ಪುಸ್ತಕಲಯ ಸಾಹಿತ್ಯ ಬಳಗವು ಕಳೆದ ಎರಡು ವರ್ಷಗಳಿಂದ ದಿ. ಶ್ರೀಮಾನ್ ನರಸಯ್ಯ ಅವರ ಸ್ಮರಣಾರ್ಥ ಪ್ರಕಟಿತ ಕೃತಿಗಳನ್ನು ಆಹ್ವಾನಿಸಿ, ಆಯ್ಕೆಯಾದ ಕೃತಿಗಳಿಗೆ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಈ ವರ್ಷ ಪ್ರಶಸ್ತಿಗೆ ಸುಮಾರು 80ಕ್ಕೂ ಹೆಚ್ಚು ಕೃತಿಗಳು ಬಂದಿದ್ದು, ನಿರ್ಣಾಯಕರ ಆಯ್ಕೆಯಂತೆ ಸೃಜನಶೀಲವೆನಿಸುವ 15 ಕೃತಿಗಳ ಕಿರು ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ 15 ಕೃತಿಗಳಲ್ಲಿ ಸೃಜನಶೀಲವೆನಿಸುವ ಆರು ಕೃತಿಗಳನ್ನು ತೀರ್ಪುಗಾರರಾಗಿ ಡಾ. ನೇತ್ರಾವತಿ ಹರಿಪ್ರಸಾದ್ (ಪ್ರಾಧ್ಯಾಪಕರು, ರೇವಾ ವಿಶ್ವವಿದ್ಯಾಲಯ, ಬೆಂಗಳೂರು) ಅವರು ಆಯ್ಕೆ ಮಾಡಿದ್ದಾರೆ. ಅದರಲ್ಲಿ ಸೃಜನಶೀಲವೆನಿಸುವ ಒಂದು ಕೃತಿಗೆ 2022ರ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿಯನ್ನು, ಅದರ ನಂತರದ ಐದು ಕೃತಿಗಳಿಗೆ ಅವ್ವ ಸೃಜನಶೀಲ ಸಾಹಿತ್ಯ ಮೆಚ್ಚುಗೆ ಬಹುಮಾನವನ್ನು ನೀಡಿ ಅಭಿನಂದಿಸಲಾಗುತ್ತದೆ. ಜನವರಿ ತಿಂಗಳಿನಲ್ಲಿ ನಡೆಯುವ ಅವ್ವ ಪುಸ್ತಕಾಲಯ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಅವ್ವ ಪುಸ್ತಕಾಲಯದ ಅಧ್ಯಕ್ಷರಾದ ನಾರಾಯಣ್ ಕೆ ಎನ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಪ್ರಶಸ್ತಿಗೆ ಹಾಗೂ ಮೆಚ್ಚುಗೆ ಬಹುಮಾನಕ್ಕೆ ಆಯ್ಕೆಯಾದ ಕೃತಿಗಳ ಹೆಸರು ಮತ್ತು ಲೇಖಕರ ಹೆಸರನ್ನು ಈ ಕೆಳಗೆ ನೀಡಲಾಗಿದೆ.   2022ರ ಅ...

ಅವ್ವ ಪುಸ್ತಕಾಲಯ ಸಾಹಿತ್ಯ ಸ್ಪರ್ಧೆಗಳು 2022

ಹಲವಾರು ಸಾಹಿತ್ಯಕ ಚಟುವಟಿಕೆಗಳಿಂದ ಸಾಹಿತ್ಯಾಸಕ್ತರ ಮನೆಮಾತಾಗಿರುವ ಅವ್ವ ಪುಸ್ತಕಾಲಯ ಬಳಗವು ಮೂರನೆ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಏರ್ಪಡಿಸಿದೆ.  ಸ್ಪರ್ಧೆ 01 - ಸ್ವರಚಿತ ಕವನ ವಾಚನ : "ಅವ್ವ" ವಿಷಯಾಧಾರಿತ ಸ್ವರಚಿತ ಕವನವೊಂದನ್ನು 4 ನಿಮಿಷಗಳ ಒಳಗೆ ವಾಚಿಸಿ ನಮಗೆ ಕಳುಹಿಸಬಹುದಾಗಿದೆ.  ಸ್ಪರ್ಧೆ 02 - ಪೂರ್ಣಚಂದ್ರ ತೇಜಸ್ವಿ ಕುರಿತ ಲೇಖನ ಸ್ಪರ್ಧೆ : ಕನ್ನಡ ಸಾರಸ್ವತ ಲೋಕ ಕಂಡ ಅತ್ಯದ್ಭುತ ಸಾಹಿತಿ, ಅಕ್ಷರ ಲೋಕದ ಮಾಯಾವಿ, ಆಲ್ರೌಂಡರ್ ಪೂರ್ಣಚಂದ್ರ ತೇಜಸ್ವಿಯವರ ವ್ಯಕ್ತಿತ್ವ, ಹವ್ಯಾಸಗಳು, ಕೃತಿಗಳನ್ನು ಕುರಿತಂತೆ 500 ಪದಗಳನ್ನು ಮೀರದ ಲೇಖನವನ್ನು ಬರೆದು ನಮಗೆ ಕಳುಹಿಸಬಹುದಾಗಿದೆ.  ಎರಡೂ ಸ್ಪರ್ಧೆಗಳಿಗೆ ಯಾವುದೇ ಪ್ರವೇಶ ಶುಲ್ಕವಾಗಲೀ, ವಯೋಮಿತಿಯಾಗಲಿ ಇಲ್ಲ. ತೀರ್ಪುಗಾರರ ತೀರ್ಮಾನವೇ ಅಂತಿಮ. ಕವನ ವಾಚನದ ವೀಡಿಯೋ ಮತ್ತು ಲೇಖನವನ್ನು (ಪಿಡಿಎಫ್ ರೂಪದಲ್ಲಿರಲಿ) 8548948660 ನಂಬರಿನ ವಾಟ್ಸಾಪಿಗೆ ದಿನಾಂಕ 25-12-2022 ರ ಒಳಗೆ ಕಳುಹಿಸಬಹುದಾಗಿದೆ.  ಪ್ರತಿ ಸ್ಪರ್ಧೆಯಲ್ಲಿ ಮೂರು ಜನ ವಿಜೇತರನ್ನು ಆಯ್ಕೆ ಮಾಡಿ, ಜನವರಿ ತಿಂಗಳಲ್ಲಿ ನಡೆಯುವ ಅವ್ವ ಪುಸ್ತಕಾಲಯ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಪುಸ್ತಕ ಬಹುಮಾನ ಮತ್ತು ಪ್ರಮಾಣಪತ್ರದೊಂದಿಗೆ ಅಭಿನಂದಿಸಲಾಗುತ್ತದೆ.